Friday, January 30, 2009

ಓ ಬಾ ಅತಿಥಿ .....

ಬಹಳ ದಿನಗಳ ಬಯಕೆ ಇವತ್ತು ಪೂರೈಸ್ತು.... ನನ್ನ ಮೊಟ್ಟಮೊದಲ ಕನ್ನಡ ಬ್ಲಾಗ್ ಇವತ್ತು ತೆರೆ ಕಂಡಿದೆ. ಎಷ್ಟೋ ವರ್ಷಗಳಾದ ಮೇಲೆ ಮತ್ತೆ ಬರವಣಿಗೆ ಶುರುವಾಗಿದೆ. ಏನ್ ಬರೀಬೇಕು ಅಂತ ಇನ್ನು ತಿಳಿದಿಲ್ಲ... ಆದರೆ ಅದರ ಚಿಂತೆ ಏನಿಲ್ಲ ಬಿಡಿ... ಮನಸ್ಸಿನ ಮಾತುಗಳಿಗೆನು ಕೊರತೆ ಇಲ್ಲ... ಕಥೆಗಳ ರೂಪದಲ್ಲೋ... ಕವನಗಳ ರೂಪದಲ್ಲೋ... ಹರಟೆ ಆಗಿನೋ... ಕೇಳೋರು ಇರ್ಲಿ.. ಇಲ್ದೆ ಇರ್ಲಿ.. "ಹಾಡುವುದು ಅನಿವಾರ್ಯ ಕರ್ಮ ನನಗೆ" ಅಂತ ಮಾತು ಹೊರಡ್ತಾನೆ ಇರುತ್ತೆ.


ಹೀಗೆ ಹೋಗಿ ಬರ್ತಾ... ಒಮ್ಮೊಮ್ಮೆ ಇಣಿಕಿ ನೋಡಿ, ಹಿಡಿಸೋ ಮಾತುಗಳಿದ್ರೆ ಬನ್ನಿ, ಸ್ವಲ್ಪ ಹೊತ್ತು ಸಮಯ ಕಳೆಯೋಣ. ಸಂವಾದದಲ್ಲಿ ... ಹಾಗೆ "ಸಂ"ವಾದಗಳೂ ಆಗಬಹುದೇನೋ!! ;) ಆಗಲೀ! ಅದಕ್ಕೇನಂತೆ? ಅಲ್ವಾ?! ಮುಖ್ಯವಾಗಿ "ಸ್ಫಟಿಕದ ಸಲಾಕೆಯಂತಿರಬೇಕು", "ಮುತ್ತಿನ ಹಾರದಂತಿರಬೇಕು".


ಯಾವುದರ ಬಗ್ಗೆ ಹರಟೆ ಹೊಡೆಯೋಣ ಅಂತ ಕೇಳ್ತೀರಾ? ಹರಟೆಗೆ ಎಂತದ್ರೀ ವಿಷಯ ಅಲ್ವೇ? ಮನಸ್ಸಿಗೆ ಹಿಡಿಸಿದ ಹಾಡುಗಳಿಂದ ಹಿಡಿದು... ಹಿಡಿಸದ ವಿಷಯಗಳ ಬಗ್ಗೆ, ರವಿ ಮುಟ್ಟಿದ್ದು.. ಕವಿ ಕಂಡಿದ್ದರ ಬಗ್ಗೆ, ಒಂದೆ ಎರಡೇ... "ಈ ಸಂಭಾಷಣೆ ... ನಮ್ಮಇ-ಸಂಭಾಷಣೆ .. ಅತಿ ನವ್ಯ ... ರಸ ಕಾವ್ಯ.. ಮಧುರ.. ಮಧುರ .. ಮಧುರ"ವಾಗಿರಲಿ ಅನ್ನೋದೇ ಉದ್ದೇಶ.

ಮನೆ ತೆರೆದಿದೆ... ಅತಿಥಿಗಳಾಗಿ ಒಳಗೆ ಬನ್ನಿ... ಮನೆಯವರಾಗಿ ಇಲ್ಲೇ ಉಳೀತೀರ ಅನ್ನೋ ಆಸೆಯಿಂದ ಬಾಗಿಲನ್ನ ತೆರೆದಿದ್ದೇನೆ. :)

8 comments:

  1. Well done BOY!

    ಮನೆ ತೆರೆದಿದ್ದಾಯ್ತು. ಇನ್ನು ಒಂದೊಂದಾಗಿ ಪರಿಕರಗಳು ತುಂಬಿದರಾಯ್ತು. ನಾವೇನು ಬರ್ತಾನೇ ಇರ್ತೀವಿ.
    -ಜ್ಯೋತಿ

    ReplyDelete
  2. This comment has been removed by the author.

    ReplyDelete
  3. ಪ್ರವೀಣ ,

    ತುಂಬ ಸಂತೋಷವಾಯಿತು. ತೆರೆದಿದೆ ಮನೆಗೆ ನಾನಂತೂ ರೆಗ್ಯುಲರ್ ಅತಿಥಿ :)

    ಶುಭಾಶಯಗಳು.

    ReplyDelete
  4. This comment has been removed by the author.

    ReplyDelete
  5. Great!!!!!!!!!! Now I am also getting inspired :)

    ReplyDelete
  6. ಆವರೂಪದೊಳು ಬಂದರು ಸರಿಯೇ
    ಆವವೇಷದೊಳು ನಿಂದರು ಸರಿಯೇ
    ನೇಸರುದಯದೊಳು ಬಹೆಯಾ ಬಾ
    ತಿಂಗಳಂದದಲಿ ಬಹೆಯಾ ಬಾ...

    Guru

    ReplyDelete
  7. ಏನ್ ಮರೀ, ಬನ್ನಿ ಅಂತ ಕರ್ದ್'ಬಿಟ್ಟು ನೀನೇ ನಾಪತ್ತೆ! ಎಲ್ ಹೋದಿ?

    ReplyDelete
  8. ತೆರೆದಿದೆ ಮನೆ ಓ ಬಾ ಅತಿಥಿ! ಹೊಸ ಬೆಳಕಿನ ... ಹೊಸ ಗಾಳಿಯ... ಹೊಸ ಬಾಳನು ತಾ ಅತಿಥಿ :)


    ಜ್ಯೋತಿ ಅವರೆ, ನೋಡಿ, ಪುನಃ ಬರೀತಿದೀನಿ :) ಸ್ವಲ್ಪ ಕೆಲ್ಸ ಜಾಸ್ತಿ ಆಗಿತ್ತು.. ಈಗ ಮತ್ತೆ ಇಲ್ಲಿ ... ವಾಪಸ್! :)

    ReplyDelete